News

...N.B.:-Up gradation of our BLOG depends on the availability of INTERNET ...

Saturday, November 15, 2014

"ನೆಹರೂ ಜಯಂತಿ"ಯ ಅಂಗವಾಗಿ ರಕ್ಷಕರ ತಿಳುವಳಿಕಾ ಶಿಬಿರವನ್ನು ಆಯೋಜಿಸಲಾಗಿದ್ದು ವಾರ್ಡ್ ಸದಸ್ಯ ಶ್ರೀ ಅಬೂಬಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಶಾಲಾ ಮುಖ್ಯೋಪಾಧ್ಯಾಯ ಶ್ರೀ ನಾಗರಾಜ ಅಧ್ಯಕ್ಷತೆ ವಹಿಸಿದ್ದರು . ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಶ್ರೀಹರಿ ಭಟ್ ಭಾಗವಹಿಸಿದ್ದರು


Saturday, November 8, 2014

ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾಕ್ರೀಡಾಕೂಟವು ನಮ್ಮ ಶಾಲೆಯಲ್ಲಿ ನವಂಬರ್ ೫ ರಿಂದ ೭ರ ವರೆಗೆ ಜರಗಿತು . ಕ್ರೀಡಾಜ್ಯೋತಿಯನ್ನು ಅಗಲ್ಪಾಡಿ ದೇವಸ್ಥಾನದ ವಠಾರದಿಂದ ಚಂಡೆಮೇಳದೊಂದಿಗೆ ತರಲಾಯಿತು . ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕೈಲಾಸಮೂರ್ತಿ ಧ್ವಜಾರೋಹಣ ನೆರವೇರಿಸಿದರು . ಈ ಸಂದರ್ಭದಲ್ಲಿ ಕುಮ್ಬ್ಡಾಜೆ  ಗ್ರಾ . ಪಂ . ಸದಸ್ಯ ರವೀಂದ್ರ  ರೈ ಗೋಸಾಡ ,ಶಾಲೆಯ ಪ್ರಿನ್ಸಿಪಾಲ್ ಶ್ರೀನಿವಾಸ ಭಟ್ ,ಮುಖ್ಯಶಿಕ್ಷಕ ಶ್ರೀ ನಾಗರಾಜ , ಕ್ರೀಡಾಕೂಟದ  ಪ್ರಧಾನ  ಕಾರ್ಯದರ್ಶಿ ಶ್ರೀ ಶಶಿಕಾಂತ ಬಲ್ಲಾಳ್ ,ಪಿ ಟಿ ಎ . ಅಧ್ಯಕ್ಷ  ಶ್ರೀ ಗಣರಾಜ ,ಹರೀಶ ನಾರಂಪಾಡಿ ಮೊದಲಾದವರು ಉಪಸ್ಥಿತರಿದ್ದರು

Monday, October 13, 2014


ಕುಂಬ್ಳೆ  ಉಪಜಿಲ್ಲಾ  ಕ್ರೀಡಾ  ಕೂಟ - ಸಮಿತಿಗಳ ರೂಪೀಕರಣ

ಅಗಲ್ಪಾಡಿ  ಅಕ್ಟೋಬರ್ 13 :ಕುಂಬ್ಳೆ  ಉಪಜಿಲ್ಲಾ  ಮಟ್ಟದ  ಕ್ರೀಡಾ  ಕೂಟವು  ನವೆಂಬರ್  ತಿಂಗಳ 5 ,6 , 7 ತರೀಕುಗಳಲ್ಲಾಗಿ ಅಗಲ್ಪಾಡಿ  ಶ್ರೀ  ಅನ್ನಪೂರ್ಣೇಶ್ವರಿ  ಹಿರಿಯ  ಪ್ರೌಡ  ಶಾಲೆಯಲ್ಲಿ  ನಡೆಯಲಿದೆ . ಇದನ್ನು ಯಶಸ್ವಿಯಾಗಿ  ನಡೆಸುವ  ಸಲುವಾಗಿ ವಿವಿಧ  ಸಮಿತಿಗಳ  ರೂಪೀಕರಣವು ಅಗಲ್ಪಾಡಿ  ಶಾಲೆಯಲ್ಲಿ  ನಡೆಯಿತು . ಕುಂಬ್ಳೆ   ಉಪಜಿಲ್ಲಾ  ಎ  . ಇ . ಓ  ಶ್ರೀ ಕೈಲಾಸ್   ಮೂರ್ತಿಯವರ  ನೇತ್ರತ್ವದಲ್ಲಿ ನಡೆದ ಈ  ಕಾರ್ಯಕ್ರಮದಲ್ಲಿ ,ಪ್ರಿನ್ಸಿಪಾಲರಾದ ಶ್ರೀ  ಶ್ರೀನಿವಾಸ  ಭಟ್ ,ಮುಖ್ಯೋಪಾಧ್ಯಾಯರಾದ  ಶ್ರೀ  ಬಿ  ನಾಗರಾಜಾ ,ಪಿ . ಟಿ . ಎ  ಅದ್ಯಕ್ಷರಾದ  ಶ್ರೀ ಗಣರಾಜ ,ಮತ್ತು    ಕುಂಬ್ಳೆ   ಉಪಜಿಲ್ಲೆಯ ಶಾಲೆಗಳಿಂದ ಬಂದ  ಅಧ್ಯಾಪಕರು ,ಪಂಚಾಯತ್  ಪ್ರತಿಹಿನಿಧಿಗಳು ಹಾಗೂ  ವಿವಿಧ  ಕ್ಲಬ್ಬುಗಳ  ಪದಾಧಿಕಾರಿಗಳು ಹಾಜರಿದ್ದರು .



Saturday, October 4, 2014

ಒಕ್ಟೋಬರ್ 2:
     ಗಾಂಧೀ ಜಯಂತಿಯ ಅಂಗವಾಗಿ "ಸ್ವಚ್ ಭಾರತ್ " ಆಂದೋಲನದ ಉದ್ಘಾಟನೆಯನ್ನು ಪಿ.ಟಿ. ಎ. ಅಧ್ಯಕ್ಷರಾದ ಶ್ರೀ ಗಣರಾಜ . ಕೆ. ಇವರು ನೆರವೇರಿಸಿದರು.ಇದರ ಮಹತ್ವವನ್ನು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಕ್ಕಳು ಶಾಲಾಪರಿಸರವನ್ನು ಶುಚಿಗೊಳಿಸಿದರು.





Tuesday, September 30, 2014

ಸಾಕ್ಷರತಾ ಶಿಬಿರ   27/09/2014

        27/09/2014 ಶನಿವಾರದಂದು ನಮ್ಮ ಶಾಲೆಯಲ್ಲಿ ಸಾಕ್ಷರತಾ ಶಿಬಿರ    ಜರಗಿತು.  




  ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗಣರಾಜ  ಇವರು ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಶ್ರೀ ಅಬೂಬಕ್ಕರ್ ಉಪಸ್ಥಿತರಿದ್ದರು . ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಬಿ ನಾಗರಾಜ ಸ್ವಾಗತಿಸಿದರು. ಅಧ್ಯಾಪಕರಾದ ಶ್ರೀ ಸತ್ಯನಾರಾಯಣ ಭಟ್ ನಿರೂಪಿಸಿದರು. ಅಧ್ಯಾಪಕಿ ಶ್ರೀಮತಿ ದಿವ್ಯ ವಂದಿಸಿದರು . ವಿದ್ಯಾರ್ಥಿಗಳಿಂದ ವಿವಿಧ ಚಟುವಟಿಕೆಗಳು ಜರಗಿದವು. 

Thursday, September 25, 2014

ನೂತನ ಶಾಲಾ ಬ್ಲಾಗ್  ಉದ್ಘಾಟನೆ 
25/09/2014 ನೆ  ಗುರುವಾರ ವಾರ್ಡ್ ಸದಸ್ಯ ಶ್ರೀ ಯಂ . ಅಬೂಬಕ್ಕರ್ ಇವರಿಂದ ಉದ್ಘಾಟನೆಗೊಂಡಿತು . ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಗಣರಾಜ ಇವರು ಶುಭ ಹಾರೈಸಿದರು. ಶಾಲಾಮುಖ್ಯೋಪಧ್ಯಾಯರಾದ ಶ್ರೀ ಬಿ ನಾಗರಾಜ ಉಪಸ್ಥಿತರಿದ್ದರು.


Wednesday, September 24, 2014


ಶ್ರೀ ಅನ್ನಪೂರ್ಣೇಶ್ವರಿ  ಹಿರಿಯ  ಪ್ರೌಢ  ಶಾಲೆ  ಅಗಲ್ಪಾಡಿ : ಮಂಗಳಯಾನ  ಯಶಸ್ವಿಗೆ ಶ್ರಮಿಸಿದ  ವಿಜ್ಞಾನಿಗಳಿಗೆ  ಶಾಲಾ  ಅಸೆಂಬ್ಲಿಯಲ್ಲಿ  ಅಭಿನಂದನೆ  ಸಲ್ಲಿಸಲಾಯಿತು